Category: ಕನ್ನಡದಲ್ಲಿ Kannada
ದೀಪಾವಳಿ ಮತ್ತು ಕರ್ತನಾದ ಯೇಸು

ನಾನು ಭಾರತ ದೇಶದಲ್ಲಿ ಕೆಲಸಮಾಡುತ್ತಿರುವಾಗ ಮೊದಲನೆಯ ಸಾರಿ ‘ಬಹಳ ಹತ್ತಿರದಿಂದ’ ಅದರ ಅನುಭವವಾಯಿತು. ನಾನು ಅಲ್ಲಿ ಒಂದು ತಿಂಗಳು ಉಳಿದುಕೊಳ್ಳಬೇಕಾಯಿತು ಮತ್ತು ನಾನು ಅಲ್ಲಿದ್ದ ಆರಂಭದ ಸಮಯದಲ್ಲಿ ದೀಪಾವಳಿಯನ್ನು ನಾನಿದ್ದ ಸ್ಥಳದ ಸುತ್ತಮುತ್ತಲು ಎಲ್ಲೆಡೆ ಆಚರಿಸುತ್ತಿದ್ದರು. ಹೆಚ್ಚಾಗಿ ಪಟಾಕಿಗಳನ್ನು ಸಿಡಿಸುತ್ತಿದ್ದರು – ಗಾಳಿಯು ದಟ್ಟವಾಗಿ ಹೊಗೆಯಿಂದ ತುಂಬಿತ್ತು ಮತ್ತು ಇದು ನನ್ನ ಕಣ್ಣುಗಳನ್ನು ಸ್ವಲ್ಪ ಉರಿಯುವಂತೆ ಮಾಡಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಹೀಗೆ ಈ ಎಲ್ಲಾ ಸಂತೋಷವು ನನ್ನ ಸುತ್ತಲೂ ಇರುವಾಗ ನಾನು ಈ ದೀಪಾವಳಿಯನ್ನು, ಅದು ಏನಾಗಿತ್ತು ಮತ್ತು ಅದರ ಅರ್ಥ ಏನಾಗಿತ್ತೆಂದು ಕಲಿತುಕೊಳ್ಳಲು ಬಯಸಿದೆನು. ಮತ್ತು ನಾನು ಅದನ್ನು ಪ್ರೀತಿಸಲಾರಂಭಿಸಿದೆನು.
‘ದೀಪಗಳ ಹಬ್ಬವು’ ನನಗೆ ಪ್ರೇರಣೆಯನ್ನು ಕೊಟ್ಟಿತು ಯಾಕೆಂದರೆ ಯೇಶು ಸೆಟ್ ಸ್ಯಾಂಗ್ ಅಂದರೆ ಕರ್ತನಾದ ಯೇಸು ಎಂದು ಪ್ರಸಿದ್ಧನಾಗಿದ್ದ ಆತನನ್ನು ನಾನು ನಂಬುವವನು ಮತ್ತು ಹಿಂಬಾಲಿಸುವವನು ಆಗಿದ್ದೆನು. ಮತ್ತು ಆತನ ಬೋಧನೆಯ ಮುಖ್ಯ ಸಂದೇಶವೇನೆಂದರೆ ನಮ್ಮೊಳಗಿರುವ ಕತ್ತಲೆಯನ್ನು ಆತನ ಬೆಳಕು ಜಯಿಸುತ್ತದೆ. ಆದುದರಿಂದ ದೀಪಾವಳಿಯು ಹೆಚ್ಚಿನಷ್ಟು ಕರ್ತನಾದ ಯೇಸುವಿನ ಹಾಗೆ ಇರುತ್ತದೆ.
ನಮ್ಮೊಳಗಿರುವ ಕತ್ತಲೆಯೊಂದಿಗೆ ನಾವು ಸಮಸ್ಯೆಯನ್ನು ಹೊಂದಿದ್ದೇವೆಂದು ನಮ್ಮಲ್ಲಿ ಅನೇಕರು ಗ್ರಹಿಸಿಕೊಳ್ಳುತ್ತೇವೆ. ಆದುದರಿಂದಲೇ ಅನೇಕ ದಶಲಕ್ಷ ಜನರು ಕುಂಭ ಮೇಳ ಹಬ್ಬದಲ್ಲಿ ಭಾಗವಹಿಸುವರು – ಯಾಕೆಂದರೆ ನಮ್ಮಲ್ಲಿ ಪಾಪವಿದೆಯೆಂದು ಮತ್ತು ನಾವು ಅವುಗಳನ್ನು ತೊಳೆದು ನಮ್ಮನ್ನು ನಾವು ಶುದ್ಧಿಪಡಿಸಿಕೊಳ್ಳಬೇಕಾಗಿದೆ ಎಂದು ಲಕ್ಷಾಂತರ ಜನರು ತಿಳಿದಿದ್ದಾರೆ. ಹಾಗೂ ಪ್ರಾರ್ಥಸ್ನಾನ ಎಂದು (ಅಥವಾ ಪ್ರಥಾಸನ) ಮಂತ್ರವು ಚಿರಪರಿಚಿತವಾಗಿರುವ ಪ್ರಾಚೀನ ಪ್ರಾರ್ಥನೆಯಾಗಿದೆ, ಇದು ನಮ್ಮೊಳಗಿರುವ ಈ ಪಾಪ ಅಥವಾ ಕತ್ತಲೆಯನ್ನು ಅರಿಕೆಮಾಡುತ್ತದೆ.
ನಾನು ಪಾಪಿಯಾಗಿದ್ದೇನೆ. ನಾನು ಪಾಪದ ಪರಿಣಾಮವಾಗಿದ್ದೇನೆ. ನಾನು ಪಾಪದಲ್ಲಿ ಹುಟ್ಟಿದ್ದೇನೆ. ನನ್ನ ಆತ್ಮವು ಪಾಪದ ಅಧೀನದಲ್ಲಿದೆ. ನಾನು ಪಾಪಿಗಳಲ್ಲೇ ಬಹಳ ಹೀನನು. ಓ ಕರ್ತನೇ, ಸುಂದರವಾದ ಕಣ್ಣುಳ್ಳವನೇ, ಬಲಿದಾನ ಮಾಡುವ ಓ ಕರ್ತನೇ, ನನ್ನನ್ನು ರಕ್ಷಿಸು.
ಆದರೆ ಈ ಕತ್ತಲೆಯ ಆಲೋಚನೆಗಳು ಅಥವಾ ನಮ್ಮೊಳಗಿರುವ ಪಾಪವು ಉತ್ತೇಜಿಸುವಂತದ್ದಲ್ಲ. ಬಹುಶಃ ನಾವು ಕೆಲವೊಮ್ಮೆ ಇದನ್ನು ‘ಕೆಟ್ಟ ಸುದ್ಧಿ’ ಎಂದು ಆಲೋಚಿಸುತ್ತೇವೆ. ಆದುದರಿಂದಲೇ ಬೆಳಕು ಕತ್ತಲೆಯನ್ನು ಜಯಿಸುತ್ತದೆ ಎಂಬ ಆಲೋಚನೆಯು ನಮಗೆ ಹೆಚ್ಚು ನಿರೀಕ್ಷೆಯನ್ನು ಕೊಡುತ್ತದೆ ಮತ್ತು ನಾವು ಇದನ್ನು ಆಚರಿಸುತ್ತೇವೆ. ಹೀಗೆ ದೀಪಗಳ ಜೊತೆಯಲ್ಲಿ ಸಿಹಿ ತಿನಿಸುಗಳು ಮತ್ತು ಪಟಾಕಿಗಳ ಮೂಲಕ ಬೆಳಕು ಕತ್ತಲೆಯನ್ನು ಜಯಿಸುತ್ತದೆ ಎಂಬ ಈ ನಿರೀಕ್ಷೆಯನ್ನು ದೀಪಾವಳಿಯು ವ್ಯಕ್ತಪಡಿಸುತ್ತದೆ.
ಕರ್ತನಾದ ಯೇಸು – ಲೋಕದಲ್ಲಿ ಬೆಳಕಾಗಿದ್ದಾನೆ
ಕರ್ತನಾದ ಯೇಸು ಇದನ್ನೇ ಮಾಡಿದ್ದಾನೆ. ವೇದ ಪುಸ್ತಕದಲ್ಲಿರುವ (ಅಥವಾ ಸತ್ಯವೇದ) ಸುವಾರ್ತೆಯು ಯೇಸುವನ್ನು ಈ ಕೆಳಗಿನ ರೀತಿಯಲ್ಲಿ ವಿವರಿಸುತ್ತದೆ:
1 ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು. 2 ಆತನೇ ಆದಿಯಲ್ಲಿ ದೇವರೊಂದಿಗೆ ಇದ್ದನು. 3 ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ್ಲ. 4 ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯ ರಿಗೆ ಬೆಳಕಾಗಿತ್ತು. 5 ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ. (ಯೋಹಾನ 1:1-5)
ಆದುದರಿಂದ ನೋಡಿರಿ, ಈ ‘ವಾಕ್ಯವು’ ದೀಪಾವಳಿಯು ವ್ಯಕ್ತಪಡಿಸುವ ನಿರೀಕ್ಷೆಯ ನೆರವೇರಿಕೆಯಾಗಿದೆ. ಮತ್ತು ಈ ನಿರೀಕ್ಷೆಯು ದೇವರಿಂದ ಈ ‘ವಾಕ್ಯದಲ್ಲಿ’ ಬರುತ್ತದೆ, ಕ್ರಮೇಣವಾಗಿ ಇದನ್ನು ಯೋಹಾನನು ಕರ್ತನಾದ ಯೇಸು ಎಂದು ಗುರುತಿಸುತ್ತಾನೆ. ಈ ಸುವಾರ್ತೆಯು ಹೀಗೆ ಹೇಳುವದರ ಮೂಲಕ ಮುಂದುವರೆಯುತ್ತದೆ,
9 ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು. 10 ಆತನು ಲೋಕದಲ್ಲಿ ಇದ್ದನು; ಲೋಕವು ಆತನಿಂದ ಉಂಟಾಯಿತು; ಲೋಕವು ಆತನನ್ನು ಅರಿಯಲಿಲ್ಲ. 11 ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ. 12 ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು. 13 ಇವರು ರಕ್ತದಿಂದಾಗಲಿ ಇಲ್ಲವೆ ಶರೀರದ ಇಚ್ಛೆಯಿಂದಾಗಲಿ ಇಲ್ಲವೆ ಮನುಷ್ಯನ ಇಚ್ಛೆಯಿಂದಾ ಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು. (ಯೋಹಾನ 1:9-13)
ಕರ್ತನಾದ ಯೇಸು ಹೇಗೆ ‘ಪ್ರತಿಯೊಬ್ಬರಿಗೂ ಬೆಳಕನ್ನು ಕೊಡಲು’ ಬಂದನೆಂದು ಇದು ವಿವರಿಸುತ್ತದೆ. ಇದು ಕೇವಲ ಕ್ರೈಸ್ತರಿಗೆ ಎಂದು ಕೆಲವರು ಆಲೋಚಿಸುತ್ತಾರೆ, ಆದರೆ ಈ ಕೊಡುಗೆಯು ‘ದೇವರ ಮಕ್ಕಳಾಗಲು’ ಈ ‘ಲೋಕದಲ್ಲಿರುವ’ ‘ಪ್ರತಿಯೊಬ್ಬರಿಗೂ’ ಆಗಿದೆ ಎಂದು ಗಮನಿಸಿರಿ. ಈ ಕೊಡುಗೆಯು ಒಂದಾಗಿದೆ, ದೀಪಾವಳಿಯಂತೆ ತಮ್ಮೊಳಗೆ ಬೆಳಕು ಕತ್ತಲೆಯನ್ನು ಜಯಿಸುವಂತೆ ಆಸಕ್ತಿಯುಳ್ಳ ಕನಿಷ್ಠ ಪ್ರತಿಯೊಬ್ಬರಿಗೂ ಆಗಿದೆ.
ಕರ್ತನಾದ ಯೇಸುವಿನ ಜೀವಿತವನ್ನು ನೂರಾರು ವರ್ಷಗಳ ಹಿಂದೆಯೇ ಪ್ರವಾದಿಸಲಾಗಿತ್ತು
ಕರ್ತನಾದ ಯೇಸುವನ್ನು ಕುರಿತಾದ ಅಸಾಧಾರಣವಾದ ಸಂಗತಿಯೆಂದರೆ ಆತನ ನರಾವತಾರವನ್ನು ಅನೇಕ ರೀತಿಗಳಲ್ಲಿ ಮತ್ತು ಉದಾಹರಣೆಗಳ ಮೂಲಕ ಮಾನವ ಚರಿತ್ರೆಯ ಆರಂಭದಲ್ಲೇ ಭವಿಷ್ಯ ನುಡಿಯಲಾಯಿತು ಮತ್ತು ಮುನ್ಸೂಚನೆ ಕೊಡಲಾಯಿತು. ಮತ್ತು ಅವುಗಳನ್ನು ಇಬ್ರಿಯ ವೇದಗಳಲ್ಲಿ ಬರೆಯಲಾಗಿದೆ. ಹೀಗೆ ಆತನು ಈ ಭೂಮಿಯ ಮೇಲೆ ಇರುವದಕ್ಕಿಂತ ಮುಂಚಿತವಾಗಿಯೇ ಆತನನ್ನು ಕುರಿತು ಬರೆಯಲಾಗಿತ್ತು. ಮತ್ತು ಆತನ ನರಾವತಾರದ ಕೆಲವು ಮುನ್ನುಡಿಗಳು ಋಗ್ವೇದದಲ್ಲಿರುವ ಅನೇಕ ಪ್ರಾಚೀನ ಗೀತೆಗಳಲ್ಲಿ ಸಹ ನೆನಪಿಸಿಕೊಳ್ಳಲಾಗಿದೆ, ಇವು ಪುರುಷನ ಬರೋಣವನ್ನು ಹೊಗಳುತ್ತೇವೆ ಮತ್ತು ಮಾನವ ಕುಲದ ಅಂದರೆ ಪ್ರಳಯದ ಮನು, ಇದೇ ವ್ಯಕ್ತಿಯನ್ನು ಸತ್ಯವೇದವು – ವೇದ ಪುಸ್ತಕವು – ‘ನೋಹ’ ಎಂದು ಕರೆಯುವ. ಈ ರೀತಿಯಾದ ಕೆಲವು ಆದಿಯ ಘಟನೆಗಳನ್ನು ದಾಖಲಿಸಿದೆ. ಈ ಪ್ರಾಚೀನ ಘಟನೆಗಳು ಜನರ ಪಾಪಗಳ ಕತ್ತಲೆಯನ್ನು ವರ್ಣಿಸುತ್ತದೆ, ಹೀಗೆ ಪುರುಷನ ಅಥವಾ ಕರ್ತನಾದ ಯೇಸುವಿನ ಬರೋಣದ ನಿರೀಕ್ಷೆಯನ್ನು ಕೊಡುತ್ತದೆ.
ಋಗ್ವೇದದ ಮುನ್ಸೂಚನೆಗಳಲ್ಲಿ ದೇವರ ಮತ್ತು ಪರಿಪೂರ್ಣನಾದ ಮನುಷ್ಯನ ನರಾವತಾರದ ಪುರುಷನು ಬಲಿದಾನವಾಗುವನೆಂದು ತಿಳಿಸುತ್ತದೆ. ಈ ಬಲಿದಾನವು ನಮ್ಮ ಪಾಪಗಳ ಕರ್ಮಕ್ಕಾಗಿ ಕೊಡುವ ಕ್ರಯವಾಗಿದೆ ಮತ್ತು ನಮ್ಮ ಅಂತರ್ಯವನ್ನು ಶುದ್ಧೀಕರಿಸಲು ಸಾಕಾಗಿರುತ್ತದೆ. ತೊಳೆದುಕೊಳ್ಳುವದು ಮತ್ತು ಪೂಜೆಗಳು ಒಳ್ಳೆಯದು, ಆದರೆ ಅವು ನಮ್ಮ ಹೊರಗಿನವುಗಳಿಗೆ ಸೀಮಿತವಾಗಿವೆ. ನಮ್ಮ ಅಂತರ್ಯವನ್ನು ಶುದ್ಧೀಕರಿಸಲು ನಮಗೆ ಉತ್ತಮವಾದ ಯಜ್ಞವು ಅಗತ್ಯವಾಗಿದೆ.
ಇಬ್ರಿಯ ವೇದಗಳಲ್ಲಿ ಕರ್ತನಾದ ಯೇಸುವನ್ನು ಕುರಿತು ಪ್ರವಾದಿಸಲಾಗಿದೆ
ಋಗ್ವೇದದಲ್ಲಿರುವ ಈ ಗೀತೆಗಳ ಜೊತೆಗೆ, ಇಬ್ರಿಯ ವೇದಗಳು ಬರುವ ಈತನನ್ನು ಕುರಿತು ಪ್ರವಾದಿಸಿದವು. ಇಬ್ರಿಯ ವೇದಗಳಲ್ಲಿ ಪ್ರಮುಖವಾದವು ರಷಿ ಯೆಶಾಯನು (ಕ್ರಿ.ಪೂ 750 ರಲ್ಲಿ ಬದುಕಿದನು, ಅಂದರೆ ಕರ್ತನಾದ ಯೇಸು ಈ ಭೂಮಿಯ ಮೇಲೆ ನಡೆದ 750 ವರುಷಗಳ ಹಿಂದೆ ಆಗಿತ್ತು). ಈ ಬರುವಾತನನ್ನು ಕುರಿತು ಅವನು ಅನೇಕ ಒಳನೋಟಗಳನ್ನು ಹೊಂದಿದ್ದನು. ಅವನು ಕರ್ತನಾದ ಯೇಸುವನ್ನು ಕುರಿತು ಪ್ರಕಟಿಸಿದಾಗ ದೀಪಾವಳಿಯನ್ನು ನಿರೀಕ್ಷಿಸಿದನು:
ಕತ್ತಲೆಯಲ್ಲಿ ನಡೆಯುವ ಜನರು ದೊಡ್ಡ ಬೆಳಕನ್ನು ಕಂಡರು; ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿ ಸುತ್ತದೆ. (ಯೆಶಾಯ 9:2)
ಈ ಸಂಗತಿಯು ಯಾಕೆ ಹೀಗಿತ್ತು? ಅವನು ಮುಂದುವರೆಸಿ
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು. (ಯೆಶಾಯ 9:6)
ಆದರೆ ಆತನು ನರಾವತಾರವಾಗಿದ್ದರೂ ಸಹ ಆತನು ನಮಗೆ ನಮ್ಮ ಕತ್ತಲೆಯ ಅಗತ್ಯತೆಗಳಲ್ಲಿ ಸಹಾಯ ಮಾಡಲು ನಮಗಾಗಿ ಸೇವಕನಾಗುವನು.
4 ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು. 5 ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು. 6 ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು. (ಯೆಶಾಯ 53:4-6)
ಯೆಶಾಯನು ಕರ್ತನಾದ ಯೇಸುವಿನ ಕ್ರೂಜೆಯನ್ನು ವಿವರಿಸುತ್ತಿದ್ದಾನೆ. ಈ ಕಾರ್ಯ ಸಂಭವಿಸಿದ 750 ವರುಷಗಳ ಹಿಂದೆಯೇ ಹೇಳಿದನು ಮತ್ತು ಅವನು ಆ ಕ್ರೂಜೆಯನ್ನು ನಮ್ಮನ್ನು ಗುಣಪಡಿಸುವ ಯಜ್ಞವೆಂದು ಸಹ ವಿವರಿಸಿದನು. ಮತ್ತು ಈ ಸೇವಕನು ಅರ್ಪಿಸುವ ಈ ಕೆಲಸವು ದೇವರು ಅವನಿಗೆ ಹೀಗೆ ಹೇಳುವ ಸಂಗತಿಯಾಗಿತ್ತು.
ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು. (ಯೆಶಾಯ 49:6)
ಆದುದರಿಂದ ನೋಡಿರಿ! ಇದು ನನಗೂ ಮತ್ತು ನಿಮಗೂ ಆಗಿದೆ. ಇದು ಪ್ರತಿಯೊಬ್ಬರಿಗೂ ಆಗಿದೆ.
ಪೌಲನ ಉದಾಹರಣೆ
ಕರ್ತನಾದ ಯೇಸುವಿನ ಬಲಿದಾನವು ತನಗಾಗಿ ಎಂದು ಖಚಿತವಾಗಿ ಆಲೋಚಿಸಿದ ಒಬ್ಬ ವ್ಯಕ್ತಿ ಎಂದರೆ ಅವನೇ ಪೌಲನಾಗಿದ್ದನು, ಈತನು ಯೇಸುವಿನ ನಾಮವನ್ನು ವಿರೋಧಿಸಿದ ವ್ಯಕ್ತಿಯಾಗಿದ್ದನು. ಆದರೆ ಅವನು ಕರ್ತನಾದ ಯೇಸುವನ್ನು ಸಂಧಿಸಿದನು, ಇದು ಅವನನ್ನು ನಂತರ ಹೀಗೆ ಬರೆಯುವಂತೆ ಮಾಡಿತು.
ಕತ್ತಲೆ ಯೊಳಗಿಂದ ಬೆಳಕು ಹೊಳೆಯಲಿ ಎಂದು ಆಜ್ಞಾಪಿಸಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವ ಜ್ಞಾನವೆಂಬ ಪ್ರಕಾಶವನ್ನು ಕೊಡುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು. (2 ಕೊರಿಂಥ 4:6 )
ಪೌಲನು ಕರ್ತನಾದ ಯೇಸುವನ್ನು ವೈಯಕ್ತಿಕವಾಗಿ ಸಂಧಿಸಿದನು, ಇದು ಅವನನ್ನು ಬೆಳಕು ‘ತನ್ನ ಹೃದಯದಲ್ಲಿ ಪ್ರಕಾಶಿಸುವಂತೆ ಮಾಡಿತು.’
ನೀವು ಈ ಬೆಳಕಿನ ಯೇಸುವನ್ನು ಅನುಭವಿಸುವದು
ಹಾಗಾದರೆ ಕರ್ತನಾದ ಯೇಸು ಪಡೆದುಕೊಂಡ ಮತ್ತು ಪೌಲನು ಅನುಭವಿಸಿದ, ಈ ಕತ್ತಲೆಯಿಂದ ‘ರಕ್ಷಣೆಯನ್ನು’ ಪಡೆದುಕೊಳ್ಳಲು ಮತ್ತು ಯೆಶಾಯನು ಪ್ರವಾದಿಸಿದಂತೆ ಪಾಪವು ಬೆಳಕಾಗಲು ನಾವು ಏನು ಮಾಡಬೇಕಾಗಿದೆ? ಪೌಲನು ಈ ಪ್ರಶ್ನೆಗೆ ಮತ್ತೊಂದು ಪತ್ರಿಕೆಯಲ್ಲಿ ಉತ್ತರಗಳನ್ನು ಬರೆಯುತ್ತಾನೆ.
ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ. (ರೋಮಾ 6:23)
ಇದು ‘ಉಚಿತಾರ್ಥವರವೆಂದು’ ಅವನು ಹೇಗೆ ಹೇಳುತ್ತಾನೆಂದು ಗಮನಿಸಿ. ನಿರೂಪಣೆಯ ಪ್ರಕಾರ ಉಚಿತಾರ್ಥವರವನ್ನು ಸಂಪಾದಿಸಿಕೊಳ್ಳಲು ಆಗುವದಿಲ್ಲ. ನೀವು ಅದನ್ನು ಸಂಪಾದಿಸಿಕೊಳ್ಳದಿದ್ದರೂ ಅಥವಾ ನೀವು ಅದಕ್ಕೆ ಅರ್ಹರಾಗದಿದ್ದರೂ ಯಾರಾದರೂ ನಿಮಗೆ ಉಚಿತವಾಗಿ ಬಹುಮಾನವನ್ನು ಸುಮ್ಮನೆ ಕೊಡಬಹುದು. ಆದರೆ ಆ ಬಹುಮಾನವನ್ನು ನೀವು ‘ಅಂಗೀಕರಿಸದೆ’ ಇದ್ದರೆ ಅದು ಎಂದಿಗೂ ನಿಮ್ಮ ಸ್ವಾಧೀನದಲ್ಲಿರುವದಿಲ್ಲ. ಇಲ್ಲಿ ಅದನ್ನು ಹೆಚ್ಚು ವಿವರವಾಗಿ ತಿಳಿಸಲಾಗಿದೆ, ಆದರೆ ಯೋಹಾನನು ಈ ಹಿಂದೆ ಹೀಗೆ ಬರೆದನು,
ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು. (ಯೋಹಾನ 1:12)
ಆದುದರಿಂದ ನೀವು ಕೇವಲ ಆತನನ್ನು ಅಂಗೀಕರಿಸಿರಿ. ಉಚಿತವಾಗಿ ಕೊಡಲ್ಪಡುವ ಈ ವರಕ್ಕಾಗಿ ನೀವು ಆತನನ್ನು ಬೇಡಿಕೊಳ್ಳುವದರ ಮೂಲಕ ಹೀಗೆ ಮಾಡಬಹುದು. ನೀವು ಕೇಳುವದಕ್ಕೆ ಕಾರಣವೆಂದರೆ ಆತನು ಬದುಕಿದ್ದಾನೆ. ಹೌದು, ಆತನು ನಮ್ಮ ಪಾಪಗಳಿಗಾಗಿ ಬಲಿಯಾದನು, ಆದರೆ ಮೂರು ದಿನಗಳ ನಂತರ ತಿರಿಗಿ ಜೀವಕ್ಕೆ ಬಂದನು, ಬಾಧೆಪಡುವ ಸೇವಕನನ್ನು ಕುರಿತು ಅವನು ಬರೆದಾಗ ನೂರಾರು ವರುಷಗಳ ಹಿಂದೆ ರಷಿ ಯೆಶಾಯನು ಹೀಗೆ ಪ್ರವಾದಿಸಿದನು,
ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು. (ಯೆಶಾಯ 53:11)
ಆದುದರಿಂದ ಕರ್ತನಾದ ಯೇಸು ಬದುಕಿದ್ದಾನೆ ಮತ್ತು ನೀವು ಆತನನ್ನು ಕರೆದಾಗ ಕಿವಿಗೊಡುವನು. ನೀವು ಆತನಿಗೆ ಪ್ರಾರ್ಥಸ್ನಾನ (ಅಥವಾ ಪ್ರಥಾಸನ) ಮಂತ್ರದ ಪ್ರಾರ್ಥನೆ ಮಾಡಬಹುದು ಮತ್ತು ಆತನು ಕಿವಿಗೊಟ್ಟು ರಕ್ಷಿಸುವನು ಯಾಕೆಂದರೆ ಆತನು ನಿಮಗಾಗಿ ತನ್ನನ್ನೇ ಬಲಿಯಾಗಿ ಅರ್ಪಿಸಿಕೊಂಡನು ಮತ್ತು ಈಗ ಎಲ್ಲಾ ಅಧಿಕಾರವನ್ನು ಹೊಂದಿದ್ದಾನೆ:
ನಾನು ಪಾಪಿಯಾಗಿದ್ದೇನೆ. ನಾನು ಪಾಪದ ಪರಿಣಾಮವಾಗಿದ್ದೇನೆ. ನಾನು ಪಾಪದಲ್ಲಿ ಹುಟ್ಟಿದ್ದೇನೆ. ನನ್ನ ಆತ್ಮವು ಪಾಪದ ಅಧೀನದಲ್ಲಿದೆ. ನಾನು ಪಾಪಿಗಳಲ್ಲೇ ಬಹಳ ಹೀನನು. ಓ ಕರ್ತನೇ ಸುಂದರವಾದ ಕಣ್ಣುಳ್ಳವನೇ, ಬಲಿದಾನ ಮಾಡುವ ಓ ಕರ್ತನೇ, ನನ್ನನ್ನು ರಕ್ಷಿಸು.
ದಯವಿಟ್ಟು ಇಲ್ಲಿ ಇತರೆ ಲೇಖನಗಳನ್ನು ನೋಡಿರಿ. ಅವು ಮಾನವ ಚರಿತ್ರೆಯ ಆರಂಭದಲ್ಲಿ ಆರಂಭವಾಗುತ್ತವೆ ಮತ್ತು ಕತ್ತಲೆಯಿಂದ ನಮ್ಮನ್ನು ರಕ್ಷಿಸಿ ಬೆಳಕಿಗೆ ತರುವ, ನಮಗೆ ಉಚಿತಾರ್ಥವರವಾಗಿ ಕೊಡಲ್ಪಟ್ಟ ದೇವರ ಈ ಯೋಜನೆಯನ್ನು ಸಂಸ್ಕೃತ ಮತ್ತು ಇಬ್ರಿಯ ವೇದಗಳಿಂದ ತೋರಿಸುತ್ತದೆ.
ಈ ದೀಪಾವಳಿಯಲ್ಲಿ, ನೀವು ದೀಪಗಳನ್ನು ಬೆಳಗಿಸಿ ಮತ್ತು ಉಡುಗೊರೆಗಳನ್ನು ಬದಲಾಯಿಸಿಕೊಳ್ಳುವಾಗ, ಅನೇಕ ವರುಷಗಳ ಹಿಂದೆ ಪೌಲನು ಇದನ್ನು ಅನುಭವಿಸಿ ತನ್ನನ್ನು ಮಾರ್ಪಡಿಸಿಕೊಂಡನು, ಮತ್ತು ಕರ್ತನಾದ ಯೇಸುವಿನ ಮೂಲಕ ನಿಮಗೂ ಸಹ ಕೊಟ್ಟಿರುವ ಅಂತರ್ಯದ ಬೆಳಕಿನ ಈ ವರವನ್ನು ನೀವು ಅನುಭವಿಸಿರಿ. ದೀಪಾವಳಿ ಶುಭಾಶಯಗಳು!
ಯೇಸುವಿನ ಬಲಿದಾನದ ಮೂಲಕ ಶುದ್ಧೀಕರಣದ ವರವನ್ನು ಹೊಂದಿಕೊಳ್ಳುವದು ಹೇಗೆ?
ಎಲ್ಲಾ ಜನರಿಗಾಗಿ ತನ್ನನ್ನೇ ಯಜ್ಞವನ್ನಾಗಿ ಸಮರ್ಪಿಸಿಕೊಳ್ಳಲು ಯೇಸು ಬಂದನು. ಈ ಸಂದೇಶವನ್ನು ಪ್ರಾಚೀನ ರುಗ್ವೇದದ ಗೀತೆಗಳಲ್ಲಿ ಹಾಗೂ ಪ್ರಾಚೀನ ಇಬ್ರಿಯ ವೇದಗಳ ವಾಗ್ದಾನಗಳಲ್ಲಿ ಮತ್ತು ಹಬ್ಬಗಳಲ್ಲಿ ಮುನ್ಸೂಚಿಸಲಾಗಿದೆ. ಪ್ರತಿ ಸಾರಿ ನಾವು ಪ್ರಾರ್ಥಸ್ನಾನದ (ಅಥವಾ ಪ್ರಥಾಸನ) ಮಂತ್ರದ ಪ್ರಾರ್ಥನೆಯನ್ನು ಕಂಠಪಾಠ ಮಾಡುವಾಗ ಕೇಳುವ ಪ್ರಶ್ನೆಗೆ ಯೇಸುವೇ ಉತ್ತರವಾಗಿದ್ದಾನೆ. ಇದು ಹೇಗೆ ಸಾಧ್ಯ? ಕಾರ್ಮಿಕ ನಿಯಮವು ನಮ್ಮೆಲ್ಲರ ಮೇಲೆ ಪ್ರಭಾವಬೀರುತ್ತದೆ ಎಂದು ಸತ್ಯವೇದವು (ವೇದ ಪುಸ್ತಕ) ಪ್ರಕಟಿಸುತ್ತದೆ:
ಯಾಕಂದರೆ ಪಾಪವು ಕೊಡುವ ಸಂಬಳ ಮರಣ…..(ರೋಮಾ 6:23)
ಈ ಕೆಳಗೆ ಒಂದು ದೃಷ್ಟಾಂತದಿಂದ ಕಾರ್ಮಿಕ್ ನಿಯಮವನ್ನು ನಾನು ತೋರಿಸುತ್ತೇನೆ. “ಮರಣ” ಎಂದರೆ ಅಗಲುವಿಕೆ. ನಮ್ಮ ಆತ್ಮವು ದೇಹವನ್ನು ಅಗಲಿದಾಗ ನಾವು ಶಾರೀರಿಕವಾಗಿ ಸತ್ತಿದ್ದೇವೆ. ಅದೇ ರೀತಿಯಲ್ಲಿ ನಾವು ಆತ್ಮೀಕವಾಗಿ ದೇವರಿಂದ ಅಗಲಿದ್ದೇವೆ. ಇದು ಸತ್ಯ ಯಾಕಂದರೆ ದೇವರು ಪರಿಶುದ್ಧನಾಗಿದ್ದಾನೆ (ಪಾಪರಹಿತನು).

ಎರಡು ಬಂಡೆಗಳ ನಡುವಿನಲ್ಲಿರುವ ದೊಡ್ಡ ಕಣಿವೆಯಂತೆ ನಮ್ಮ ಪಾಪಗಳ ನಿಮಿತ್ತ ನಾವು ದೇವರಿಂದ ದೂರವಾಗಿದ್ದೇವೆ. ನಾವು ಬಂಡೆಯ ಮೇಲೆ ಇರುವಂತೆ ಮತ್ತು ದೇವರು ಮತ್ತೊಂದು ಬಂಡೆಯ ಮೇಲೆ ಇರುವಂತೆ ಊಹಿಸಿಕೊಳ್ಳಬಹುದು ಮತ್ತು ನಾವು ಈ ತಳವಿಲ್ಲದ ದೊಡ್ಡ ಪಾಪದ ಕಣಿವೆಯಿಂದ ಬೇರ್ಪಡಿಸಲ್ಪಟ್ಟಿದ್ದೇವೆ.
ಈ ಅಗಲುವಿಕೆಯು ಅಪಾರದದ ಭಾವನೆ ಮತ್ತು ಭಯವನ್ನು ಉಂಟುಮಾಡುತ್ತದೆ. ಆದುದರಿಂದ ನಾವು ಸ್ವಾಭಾವಿಕವಾಗಿ ನಮ್ಮ ಕಡೆಯಿಂದ (ಮರಣ) ದೇವರ ಕಡೆಗೆ ಕರೆದುಕೊಂಡು ಹೋಗುವ ಸೇತುವೆಯನ್ನು ಕಟ್ಟಲು ಪ್ರಯತ್ನಿಸುತ್ತೇವೆ. ನಾವು ಬಲಿಗಳನ್ನು ಅರ್ಪಿಸುತ್ತೇವೆ, ಪೂಜೆಗಳನ್ನು ಮಾಡುತ್ತೇವೆ, ತಪಸ್ಸು ಮಾಡುತ್ತೇವೆ, ಹಬ್ಬಗಳಲ್ಲಿ ಭಾಗವಹಿಸುತ್ತೇವೆ, ದೇವಸ್ಥಾನಗಳಿಗೆ ಹೋಗುತ್ತೇವೆ, ಬಹಳಷ್ಟು ಪ್ರಾರ್ಥನೆಗಳನ್ನು ಮಾಡುತ್ತೇವೆ ಮತ್ತು ನಮ್ಮ ಪಾಪಗಳನ್ನು ಕಡಿಮೆ ಮಾಡಲು ಅಥವಾ ನಿಲ್ಲಿಸಲು ಸಹ ಪ್ರಯತ್ನಿಸುತ್ತೇವೆ. ಯೋಗ್ಯತೆಯನ್ನು ಪಡೆದುಕೊಳ್ಳಲು ಈ ಕ್ರಿಯೆಗಳು ನಮ್ಮಲ್ಲಿ ಕೆಲವರಿಗೆ ಬಹಳ ಕಾಲ ತೆಗೆದುಕೊಳ್ಳಬಹುದು. ಇಲ್ಲಿರುವ ಸಮಸ್ಯೆ ಎಂದರೆ ನಮ್ಮ ಪ್ರಯತ್ನಗಳು, ಯೋಗ್ಯತೆಗಳು, ಬಲಿದಾನಗಳು, ಮತ್ತು ತಪಸ್ವಗಳು ಇತ್ಯಾದಿಗಳು ತಮಲ್ಲಿ ತಾವೇ ಕೆಟ್ಟವುಗಳಲ್ಲ ಆದರೆ ನಮ್ಮ ಪಾಪಗಳಿಗೆ ಕೊಡಬೇಕಾದ ಕ್ರಯವು (‘ಸಂಬಳವು’) ‘ಮರಣ’ ವಾಗಿರುವದರಿಂದ ಅವು ಸಾಕಾಗುವದಿಲ್ಲ. ಇದನ್ನು ಮುಂದಿನ ಚಿತ್ರದಲ್ಲಿ ದೃಷ್ಟಾಂತಪಡಿಸಲಾಗಿದೆ.

ನಮ್ಮನ್ನು ಮತ್ತು ದೇವರನ್ನು ದೂರಮಾಡಿರುವ ಅಂತರವನ್ನು ದಾಟಲು ನಮ್ಮ ಧಾರ್ಮಿಕ ಪ್ರಯಾಸಗಳಿಂದ ನಾವು ‘ಸೇತುವೆಯನ್ನು’ ಕಟ್ಟಲು ಪ್ರತ್ನಿಸುತ್ತೇವೆ. ಇದು ಕೆಟ್ಟದಲ್ಲದಿದ್ದರೂ ಸಹ ಇದು ನಮ್ಮ ಸಮಸ್ಯೆಯನ್ನು ಪರಿಹರಿಸುವದಿಲ್ಲ ಯಾಕಂದರೆ ಇದು ಮತ್ತೊಂದು ಕಡೆಗೆ ಸಂಪೂರ್ಣವಾಗಿ ಹೋಗುವಲ್ಲಿ ಯಶಸ್ವಿಯಾಗುವದಿಲ್ಲ. ನಮ್ಮ ಪ್ರಯತ್ನಗಳು ಸಾಕಾಗುವದಿಲ್ಲ. ಇದು ಸಸ್ಯ ಆಹಾರವನ್ನು ತಿನ್ನುವದರ ಮೂಲಕ ಮಾತ್ರ ಕ್ಯಾನ್ಸರ್ ರೋಗವನ್ನು (ಮರಣಕ್ಕೆ ನಡೆಸುವ) ಗುಣಪಡಿಸಲು ಪ್ರಯತ್ನಿಸುವ ಹಾಗೆ ಇರುತ್ತದೆ. ಸಸ್ಯ ಆಹಾರವನ್ನು ತಿನ್ನುವದು ಒಳ್ಳೆಯದು – ಆದರೆ ಇದು ಕ್ಯಾನ್ಸರ್ ರೋಗವನ್ನು ಗುಣಪಡಿಸುವದಿಲ್ಲ. ಇದಕ್ಕೆ ನಿಮಗೆ ಸಂಪೂರ್ಣವಾಗಿ ಬೇರ ಚಿಕಿತ್ಸೆ ಅಗತ್ಯವಾಗಿರುತ್ತದೆ. ನಾವು ಈ ಪ್ರಯತ್ನಗಳನ್ನು ಧಾರ್ಮಿಕ ಅರ್ಹತೆಯ ‘ಸೇತುವೆ’ಗೆ ದೃಷ್ಟಾಂತ ಕೊಡಬಹುದು, ಇದು ಕೇವಲ ಆಳವಾದ ಹಳ್ಳದ ಒಂದು ಭಾಗಕ್ಕೆ ಮಾತ್ರ ಕರಕೊಂಡುಹೋಗುತ್ತದೆ, ಆದರೆ ನಾವು ದೇವರಿಂದ ಇನ್ನೂ ದೂರದಲ್ಲಿಯೇ ಇರುತ್ತೇವೆ.
ಕಾರ್ಮಿಕ್ ನಿಯಮವು ಕೆಟ್ಟ ಸುದ್ದಿಯಾಗಿದೆ – ಅದು ಬಹಳ ಕೆಟ್ಟದಾಗಿದ್ದು ನಾವು ಅದನ್ನು ಅನೇಕ ವೇಳೆ ಕೇಳಲು ಸಹ ಬಯಸುವದಿಲ್ಲ ಮತ್ತು ಈ ನಿಯಮವು ಹೊರಟು ಹೋಗುತ್ತದೆ ಎಂದು ನಿರೀಕ್ಷಿಸಿ ನಮ್ಮ ಪರಿಸ್ಥಿತಿಯ ಗುರುತ್ವಾಕರ್ಷಣೆಯು ನಮ್ಮ ಆತ್ಮದೊಳಗೆ ಮುಳುಗುವವರೆಗೆ ನಾವು ಅನೇಕ ವೇಳೆ ನಮ್ಮ ಜೀವಿತವನ್ನು ಚಟುವಟಿಕೆಗಳಿಂದ ಮತ್ತು ಸಂಗತಿಗಳಿಂದ ತುಂಬಿಸುತ್ತೇವೆ. ಆದರೆ ಸತ್ಯವೇದವು ಈ ಕಾರ್ಮಿಕ ನಿಯಮದಿಂದ ಕೊನೆಗೊಳ್ಳುವದಿಲ್ಲ.
ಯಾಕಂದರೆ ಪಾಪವು ಕೊಡುವ ಸಂಬಳ ಮರಣ ಆದರೆ….. ( ರೋಮಾ 6:23 )
‘ಆದರೆ‘ ಎಂಬ ಚಿಕ್ಕ ಪದವು ಈ ನಿಯಮದ ಮಾರ್ಗದರ್ಶನವನ್ನು ಈಗ ಮತ್ತೊಂದು ದಾರಿಯಲ್ಲಿ ತೆಗೆದುಕೊಂಡು ಹೋಗಲಿದೆ, ಅದು ಶುಭವಾರ್ತೆ- ಸುವಾರ್ತೆ. ಕಾರ್ಮಿಕ್ ನಿಯಮವು ಮೊಕ್ಷ ಮತ್ತು ಜ್ಞಾನೋದಯ ಎಂಬುದಕ್ಕೆ ವ್ಯತಿರಿಕ್ತವಾಗಿದೆಯೇ. ಹಾಗಾದರೆ ಮೋಕ್ಷದ ಈ ಶುಭವಾರ್ತೆ ಯಾವುದು?
ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ. ( ರೋಮಾ 6:23 )
ಸುವಾರ್ತೆಯ ಶುಭವರ್ತಮಾನವೆಂದರೆ ನಮ್ಮ ಮತ್ತು ದೇವರ ನಡುವಿನ ಅಂತರವನ್ನು ಕಟ್ಟಲು ಯೇಸುವಿನ ಮರಣದ ಬಲಿದಾನವು ಸಾಕು. ನಾವು ಇದನ್ನು ತಿಳಿದಿದ್ದೇವೆ ಯಾಕಂದರೆ ತನ್ನ ಮರಣದ ಮೂರನೆಯ ದಿನದ ನಂತರ ಯೇಸು ದೈಹೀಕವಾಗಿ ಎದ್ದನು, ಶಾರೀರಿಕ ಪುನರುತ್ಥಾನದಲ್ಲಿ ತಿರಿಗಿ ಬದುಕಿಬಂದನು. ಈ ದಿನ ಕೆಲವು ಜನರು ಯೇಸುವಿನ ಪುನರುತ್ಥಾನವನ್ನು ನಂಬದೆ ಇರಲು ಆಯ್ಕೆಮಾಡಿಕೊಂಡರೂ ಸಹ ಈ ಬಹಳ ಬಲವಾದ ಸಂಗತಿಯನ್ನು ಒಂದು ವಿಶ್ವವಿದ್ಯಾನಿಲಯದ ಸಾರ್ವಜನಿಕ ಉಪನ್ಯಾಸದಲ್ಲಿ ತೋರಿಸಿಕೊಡಲಾಗಿದೆ ( ಇಲ್ಲಿ ವಿಡಿಯೋ ಜೋಡಣೆ )
ಯೇಸು ಪುರುಷನಾಗಿದ್ದು ಪರಿಪೂರ್ಣವಾದ ಬಲಿದಾನವನ್ನು ಕೊಡುತ್ತಿದ್ದಾನೆ. ಆತನು ಮನುಷ್ಯನಾಗಿದ್ದದರಿಂದ ಕಣಿವೆಯ ವ್ಯಾಪ್ತಿಗಳನ್ನು ಕಟ್ಟಿ ಮಾನವನ ಕಡೆಯನ್ನು ತಲುಪಲು ಆತನು ಶಕ್ತನಾಗಿದ್ದಾನೆ. ಮತ್ತು ಆತನು ಪರಿಪೂರ್ಣನಾಗಿರುವದರಿಂದ ದೇವರ ಕಡೆಯನ್ನು ಸಹ ತಲುಪುವನು. ಆತನು ಜೀವಕ್ಕೆ ಸೇತುವೆಯಾಗಿದ್ದಾನೆ ಮತ್ತು ಇದನ್ನು ಈ ಕೆಳಗಿನಂತೆ ದೃಷ್ಟಾಂತಪಡಿಸಬಹುದು.

ಯೇಸುವಿನ ಈ ಬಲಿದಾನವು ನಮಗೆ ಹೇಗೆ ಕೊಡಲ್ಪಟ್ಟಿದೆ ಎಂದು ಗಮನಿಸಿ. ಇದನ್ನು ನಮಗೆ ‘ಉಚಿತಾರ್ಥವರವಾಗಿ’… ಕೊಡಲಾಗಿದೆ. ಉಚಿತಾರ್ಥವರಗಳನ್ನು ಕುರಿತು ಆಲೋಚಿಸಿರಿ. ಉಚಿತಾರ್ಥವರವು ಏನೇ ಆಗಿದ್ದರೂ ಸರಿ, ಅದು ನಿಜವಾಗಿ ಉಚಿತಾರ್ಥವರವಾಗಿದ್ದರೆ, ನೀವು ಅದಕ್ಕಾಗಿ ಕೆಲಸಮಾಡುವದಿಲ್ಲ ಮತ್ತು ನೀವು ಅದನ್ನು ಅರ್ಹತೆಯಿಂದ ಸಂಪಾದಿಸಿಕೊಳ್ಳುವದಿಲ್ಲ. ನೀವು ಅದನ್ನು ಸಂಪಾದಿಸಿಕೊಂಡರೆ ಉಚಿತಾರ್ಥವರವು ಎಂದಿಗೂ ಉಚಿತಾರ್ಥವರವಾಗಿರುವದಿಲ್ಲ! ಅದೇ ರೀತಿಯಲ್ಲಿ ಯೇಸುವಿನ ಬಲಿದಾನವನ್ನು ನೀವು ಕೆಲಸದಿಂದಾಗಲಿ ಮತ್ತು ಯೋಗ್ಯತೆಯಿಂದಾಗಲಿ ಸಂಪಾದಿಸಿಕೊಳ್ಳಲು ಆಗುವದಿಲ್ಲ. ಇದನ್ನು ನಿಮಗೆ ಉಚಿತಾರ್ಥವರವಾಗಿ ಕೊಡಲಾಗಿದೆ.
ಮತ್ತು ಉಚಿತಾರ್ಥವರವು ಏನಾಗಿದೆ ? ಅದು ‘ನಿತ್ಯಜೀವ’ ಆಗಿದೆ. ಅಂದರೆ ನಿಮಗೆ ಮರಣವನ್ನು ತಂದ ಪಾಪವನ್ನು ಈಗ ರದ್ದುಪಡಿಸಲಾಗಿದೆ. ಯೇಸುವಿನ ಬಲಿದಾನವು. ನೀವು ದೇವರೊಂದಿಗೆ ಸಂಬಂಧ ಕಲ್ಪಿಸಿ ಸದಾಕಾಲದ ಜೀವವನ್ನು ಪಡೆದುಕೊಳ್ಳುವದಕ್ಕಾಗಿ ನೀವು ದಾಟಬಹುದಾದ ಸೇತುವೆಯಾಗಿದೆ. ಈ ಉಚಿತಾರ್ಥವರವು ಯೇಸುವಿನಿಂದ ಕೊಡಲ್ಪಟ್ಟಿದೆ, ಆತನು ಮರಣದಿಂದ ಎದ್ದು ಬರುವದರ ಮೂಲಕ ತನ್ನನ್ನೇ ‘ಕರ್ತನೆಂದು’ ತೋರಿಸಿಕೊಟ್ಟನು.
ಯೇಸು ನಮಗೆ ಉಚಿತಾರ್ಥವರವಾಗಿ ಕೊಡುವ ಈ ಜೀವದ ಸೇತುವೆಯನ್ನು ನೀವು ಮತ್ತು ನಾನು ‘ದಾಟುವದು’ ಹೇಗೆ? ಪುನಃ ಉಚಿತಾರ್ಥವರಗಳನ್ನು ಕುರಿತು ಆಲೋಚಿಸಿರಿ. ಯಾರಾದರು ಬಂದು ನಿಮಗೆ ಉಚಿತಾರ್ಥವರವನ್ನು ಕೊಟ್ಟರೆ ನೀವು ಅದಕ್ಕಾಗಿ ಕೆಲಸ ಮಾಡುವದಿಲ್ಲ. ಆದರೆ ಆ ಉಚಿತಾರ್ಥವರದಿಂದ ಲಾಭವನ್ನು ಪಡೆದುಕೊಳ್ಳಬೇಕಾದರೆ ನೀವು ‘ಅದನ್ನು ಹೊಂದಿಕೊಳ್ಳಬೇಕು’. ಒಂದು ಉಚಿತಾರ್ಥವರವನ್ನು ಕೊಟ್ಟಾಗ ಅದಕ್ಕೆ ಎರಡು ಬದಲಿಗಳಿರುತ್ತವೆ. ಉಚಿತಾರ್ಥವರವನ್ನು ನಿರಾಕರಿಸಬಹುದು ( “ಬೇಡ, ವಂದನೆಗಳು ) ಅಥವಾ ಅದನ್ನು ಪಡೆದುಕೊಳ್ಳಬಹುದು ( “ನಿಮ್ಮ ಉಚಿತಾರ್ಥವರಕ್ಕಾಗಿ ವಂದನೆಗಳು. ನಾನು ಅದನ್ನು ತೆಗೆದುಕೊಳ್ಳತ್ತೇನೆ” ). ಯೇಸು ಕೊಡುವ ಉಚಿತಾರ್ಥವರವನ್ನು ಹೊಂದಿಕೊಳ್ಳಬೇಕು. ಇದನ್ನು ಕೇವಲ ‘ನಂಬುವದು’, ‘ಅಧ್ಯಯನ ಮಾಡುವದು’, ಅಥವಾ ‘ತಿಳಿದುಕೊಳ್ಳುವದಲ್ಲ’. ಇದನ್ನು ಮುಂದಿನ ಚಿತ್ರದಲ್ಲಿ ವಿವರಿಸಲಾಗಿದೆ, ಇಲ್ಲಿ ನಾವು ದೇವರ ಕಡೆಗೆ ತಿರುಗಿಕೊಂಡು ಸೇತುವೆಯ ಮೇಲೆ ನಡೆದು ಆತನು ನಮಗೆ ಕೊಡುವ ಉಚಿತಾರ್ಥವರವನ್ನು ಹೊಂದಿಕೊಳ್ಳುತ್ತೇವೆ.

ಹಾಗಾದರೆ, ನಾವು ಉಚಿತಾರ್ಥವರವನ್ನು ಪಡೆದುಕೊಳ್ಳುವದು ಹೇಗೆ? ಸತ್ಯವೇದವು ಹೀಗೆ ಹೇಳುತ್ತದೆ :
ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ (ರೋಮಾ 10:12 ).
ಈ ವಾಗ್ದಾನವು ಒಂದು ನಿರ್ಧಿಷ್ಟ ಧರ್ಮ, ಜಾತಿ ಅಥವಾ ದೇಶದವರಿಗೆ ಅಲ್ಲದೆ, ‘ಪ್ರತಿಯೊಬ್ಬರಿಗೂ’ ಆಗಿದೆ. ಯೇಸು ಮರಣದಿಂದ ಎದ್ದು ಬಂದನು ಆದ್ದದರಿಂದ ಈತನು ಈಗಲೂ ಸಹ ಜೀವಂತನಾಗಿದ್ದಾನೆ ಮತ್ತು ಆತನು ‘ಒಡೆಯನಾಗಿದ್ದಾನೆ.’ ಆದುದರಿಂದ ನೀವು ಆತನನ್ನು ಕೂಗಿಕೊಂಡರೆ ಆತನು ಕಿವಿಗೊಟ್ಟು ನಿಮಗೆ ತನ್ನ ಜೀವದ ವರವನ್ನು ಕೊಡುವನು. ನೀವು ಆತನೊಂದಿಗೆ ಸಂಭಾಷಣೆಯನ್ನು ಮಾಡುವದರ ಮೂಲಕ ಆತನನ್ನು ಕೂಗಿ ಬೇಡಿಕೊಳ್ಳಬೇಕಾಗಿದೆ. ಬಹುಶಃ ನೀವು ಹೀಗೆ ಎಂದಿಗೂ ಮಾಡಿರುವದಿಲ್ಲ. ನೀವು ಇಂಥ ಸಂಭಾಷಣೆಯನ್ನು ಮಾಡಲು ಮತ್ತು ಆತನಲ್ಲಿ ಪ್ರಾರ್ಥಿಸಲು ಇಲ್ಲಿ ನಿಮಗೊಂದು ಮಾರ್ಗದರ್ಶನವಿದೆ. ಇದು ಕೇವಲ ಮಾಂತ್ರಿಕ ಪಠನವಲ್ಲ. ಇದು ಶಕ್ತಿಯನ್ನು ಕೊಡುವಂತ ನಿರ್ಧಿಷ್ಟವಾದ ಮಾತುಗಳಲ್ಲ. ನಮಗೆ ಈ ಉಚಿತಾರ್ಥವರವನ್ನು ಕೊಡುವ ಆತನ ಸಾಮರ್ಥ್ಯದಲ್ಲಿ ಮತ್ತು ಚಿತ್ತದಲ್ಲಿ ಭರವಸೆಯಿಡುವದಾಗಿದೆ. ನಾವು ಆತನಲ್ಲಿ ಭರವಸೆಯಿಡುವಾಗ ಆತನು ನಮಗೆ ಕಿವಿಗೊಟ್ಟು ಉತ್ತರಕೊಡುವನು. ಆದುದರಿಂದ ನೀವು ಯೇಸುವಿನೊಂದಿಗೆ ಗಟ್ಟಿಯಾಗಿ ಅಥವಾ ನಿಮ್ಮ ಆತ್ಮನಲ್ಲಿ ಮಾತನಾಡಿ ಈ ಉಚಿತಾರ್ಥವರವನ್ನು ಹೊಂದಿಕೊಳ್ಳುವಾಗ ಈ ಮಾರ್ಗದರ್ಶನವನ್ನು ಅನುಸರಿಸಲು ಹಿಂಜರಿಯಬೇಡಿರಿ –
ಕರ್ತನಾದ ಯೇಸುವೇ, ನನ್ನ ಜೀವಿತದಲ್ಲಿರುವ ಪಾಪಗಳ ನಿಮಿತ್ತ ನಾನು ದೇವರಿಂದ ದೂರವಾಗಿದ್ದೇನೆ ಎಂದು ನಾನು ತಿಳಿದುಕೊಳ್ಳುತ್ತೇನೆ. ನಾನು ಕಷ್ಟಪಟ್ಟು ಪ್ರಯತ್ನಿಸಿದರೂ, ನನ್ನ ಕಡೆಯಿಂದ ಯಾವುದೇ ಪ್ರಯತ್ನವಾಗಲಿ ಅಥವಾ ಬಲಿದಾನವು ಈ ಅಗಲುವಿಕೆಯನ್ನು ಕಟ್ಟಲು ಆಗುವದಿಲ್ಲ. ಆದರೆ ನನ್ನ ಎಲ್ಲಾ ಪಾಪಗಳನ್ನು – ನನ್ನ ಪಾಪಗಳನ್ನು ಸಹ ತೊಳೆಯುವದಕ್ಕಾಗಿ ನಿನ್ನ ಮರಣವು ಯಜ್ಞವಾಗಿತ್ತೆಂದು ನಾನು ತಿಳಿದುಕೊಳ್ಳುತ್ತೇನೆ. ನೀನು ಮರಣದಿಂದ ಎದ್ದು ಬಂದೆ ಎಂದು ನಾನು ನಂಬುತ್ತೇನೆ, ಇದರಿಂದ ನಿನ್ನ ಬಲಿದಾನವು ಸಾಕೆಂದು ನಾನು ತಿಳಿದುಕೊಳ್ಳಬಹುದು. ನನ್ನ ಪಾಪಗಳನ್ನು ತೊಳೆದು ನನಗಾಗಿ ದೇವರ ಕಡೆಗೆ ಹೋಗುವ ಸೇತುವೆಯನ್ನು ಕಟ್ಟಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ, ಹೀಗೆ ನಾನು ನಿತ್ಯಜೀವವನ್ನು ಹೊಂದಿಕೊಳ್ಳಬಹುದು. ಪಾಪಕ್ಕೆ ದಾಸತ್ವದಲ್ಲಿರುವ ಜೀವನವನ್ನು ನಡೆಸಲು ನಾನು ಬಯಸುವದಿಲ್ಲ, ಆದುದರಿಂದ ದಯವಿಟ್ಟು ಕರ್ಮದ ಹಿಡಿತದಲ್ಲಿರುವ ಈ ಪಾಪಗಳಿಂದ ನನ್ನನ್ನು ಬಿಡಿಸು. ಕರ್ತನಾದ ಯೇಸುವೇ, ನನಗಾಗಿ ಈ ಎಲ್ಲಾ ಕಾರ್ಯಗಳನ್ನು ಮಾಡಿದಕ್ಕಾಗಿ ನಿನಗೆ ವಂದನೆಗಳು ಮತ್ತು ಈಗಲೂ ಸಹ ನೀನು ನನ್ನ ಜೀವನದಲ್ಲಿ ಮಾರ್ಗದರ್ಶನ ಕೊಡು, ಇದರಿಂದ ನಿನ್ನನ್ನು ನನ್ನ ಒಡೆಯನನ್ನಾಗಿ ಸ್ವೀಕರಿಸಿ ಹಿಂಬಾಲಿಸಬಹುದು.
ಕುಂಭ ಮೇಳ ಹಬ್ಬ : ಪಾಪದ ಕೆಟ್ಟ ಸುದ್ಧಿಯನ್ನು ಮತ್ತು ನಮ್ಮ ಶುದ್ಧೀಕರಣಕ್ಕಾಗಿ ಅಗತ್ಯತೆಯನ್ನು ತೋರಿಸುತ್ತದೆ
ಮಾನವ ಚರಿತ್ರೆಯಲ್ಲಿ ಅತಿದೊಡ್ಡ ಜಾತ್ರೆಯು ಭಾರತದಲ್ಲಿ ಮತ್ತು ಅದು ಹನ್ನೆರಡು ವರುಷಗಳಲ್ಲಿ ಒಂದು ಸಾರಿ ನಡೆಯುತ್ತದೆ. ಅಲಹಬಾದ್ ಪಟ್ಟಣದ ಗಂಗಾ ನದಿ ತೀರದ ಬಳಿಯಲ್ಲಿ 55 ದಿನಗಳು ಕುಂಭ ಮೇಳ ಹಬ್ಬದ ಸಮಯದಲ್ಲಿ ಸುಮಾರು 100 ದಶಲಕ್ಷ ಜನರು ಕೂಡಿ ಬರುವರು, ಇಂಥಾ ಕಳೆದ ಹಬ್ಬದ ಆರಂಭದ ದಿನದಲ್ಲಿ ಸುಮಾರು ಹತ್ತು ದಶಲಕ್ಷ ಜನರು ಗಂಗಾ ನದಿಯಲ್ಲಿ ಸ್ನಾನ ಮಾಡಿದರು.

ಎನ್.ಡಿ.ಟಿವಿ ಪ್ರಕಾರ, ಕುಂಭ ಮೇಳದ ದಿನಗಳಲ್ಲಿ ಸುಮಾರು 20 ದಶಲಕ್ಷ ಜನರು ಸ್ನಾನ ಮಾಡುವರೆಂದು ಸಂಘಟಿಕರು ನಿರೀಕ್ಷಿಸುವರು, ಈ ಕುಂಭ ಮೇಳದ ಸಂಖ್ಯೆಗಳು, ಮುಸಲ್ಮಾನರು ಮೆಕ್ಕಾಗೆ ಮಾಡುವ ವಾರ್ಷಿಕ ಹಜ್ ಜಾತ್ರೆಯ ಸಂಖ್ಯೆಯನ್ನು ಮೀರುತ್ತವೆ, ಇದು ಪ್ರತಿ ವರುಷ ‘ಕೇವಲ’ 3-4 ದಶಲಕ್ಷ ಆಗಿರುತ್ತದೆ.
ನಾನು ಅಲಹಬಾದ್ ಗೆ ಭೇಟಿ ನೀಡಿದ್ದೇನೆ ಮತ್ತು ಇಷ್ಟೊಂದು ಲಕ್ಷಾಂತರ ಜನರಿಗೆ ಸಾಕಾಗುವಷ್ಟು ಯಾವುದೇ ಕಟ್ಟಡಗಳು ಇಲ್ಲದೆ, ಒಮ್ಮೆಯೇ ಅಲ್ಲಿ ಹೇಗೆ ಇರುತ್ತಾರೆಂದು ನಾನು ಊಹಿಸಿಕೊಳ್ಳಲು ಆಗುವದಿಲ್ಲ, ಯಾಕೆಂದರೆ ಈ ಪಟ್ಟಣವು ಅಷ್ಟೊಂದು ದೊಡ್ಡದಲ್ಲ. ಕಳೆದ ಹಬ್ಬದಲ್ಲಿ ಈ ಜನರ ದೈನಂದಿನ ಅಗತ್ಯತೆಗಳನ್ನು ಪೂರೈಸಲು ಅಂದರೆ ಶೌಚಾಲಯಗಳು ಮತ್ತು ವೈದ್ಯರ ವ್ಯವಸ್ಥೆ ಮಾಡಲು ಹೆಚ್ಚಿನ ಪ್ರಯತ್ನಗಳು ಮಾಡಲಾಯಿತೆಂದು ಬಿ.ಬಿ.ಸಿ ವರದಿ ಮಾಡಿತು.
ಹಾಗಾದರೆ, 100 ದಶಲಕ್ಷ ಜನರು ಗಂಗಾ ನದಿಯಲ್ಲಿ ಸ್ನಾನ ಮಾಡಲು ಯಾಕೆ 120 ದಶಕೋಟಿ ರೂಪಾಯಿಗಳನ್ನು ಖರ್ಚು ಮಾಡುವರು? ನೇಪಾಳದಿಂದ ಬಂದ ಓರ್ವ ಭಕ್ತಾಧಿ ಬಿ.ಬಿ.ಸಿ ಗೆ ಹೀಗೆ ತಿಳಿಸಿದನು,
“ನಾನು ನನ್ನ ಪಾಪಗಳನ್ನು ತೊಳೆದುಕೊಂಡಿದ್ದೇನೆ.”
ರೂಟರ್ಸ್ ಹೀಗೆ ವರದಿ ಸಲ್ಲಿಸುತ್ತದೆ,
“ಈ ಜೀವನ ಮತ್ತು ಹಳೆಯ ಜೀವನದಿಂದ ನನ್ನ ಎಲ್ಲಾ ಪಾಪಗಳನ್ನು ನಾನು ತೊಳೆದು ಹಾಕುತ್ತೇನೆ,” ಎಂದು ಬೆತ್ತಲೆಯಾಗಿ ಅಲೆದಾಡುತ್ತಿದ್ದ ಓರ್ವ ಸ್ವಾಮಿ ಶಂಕರಾನಂದ ಸರಸ್ವತಿ, 77, ಚಳಿಯಲ್ಲಿ ನಡುಗುತ್ತಾ ಹೇಳಿದರು.
ಎನ್.ಡಿ.ಟಿವಿ ನಮಗೆ ಈ ರೀತಿ ಹೇಳಿತು,
ಪವಿತ್ರ ನೀರಿನಲ್ಲಿ ಮುಳುಗುವದರಿಂದ ತಮ್ಮನ್ನು ಪಾಪಗಳಿಂದ ಶುದ್ಧೀಕರಿಸುತ್ತದೆ ಎಂದು ನಂಬುವ ಆರಾಧಕರು.
ಕಳೆದ ಹಬ್ಬದಲ್ಲಿ ಬಿ.ಬಿ.ಸಿ ಸಂದರ್ಶನದಲ್ಲಿ ಯಾತ್ರಿಯಾದ ಮೋಹನ್ ಶರ್ಮಾ ಹೀಗೆ ಹೇಳಿದರು, “ನಾವು ಉಂಟು ಮಾಡಿದ ಪಾಪಗಳು ಇಲ್ಲಿ ತೊಳೆಯಲ್ಪಟ್ಟಿವೆ.”
‘ಪಾಪ’ವನ್ನು ಕುರಿತು ಮಾನವನ ಸಾರ್ವತ್ರಿಕ ಗ್ರಹಿಕೆ
ಬೇರೆ ಮಾತುಗಳಲ್ಲಿ ಹೇಳುವದಾದರೆ ಲಕ್ಷಾಂತರ ಜನರು ಹಣವನ್ನು ಖರ್ಚುಮಾಡಿ, ಜನ ಸಂದಣಿಯಿರುವ ರೈಲುಗಳಲ್ಲಿ ಪ್ರಯಾಣ ಮಾಡಿ, ಇಕ್ಕಟ್ಟಿನ ಪರಿಸ್ಥಿತಿಯನ್ನು ಸಹಿಸಿಕೊಂಡು ತಮ್ಮ ಪಾಪಗಳನ್ನು ‘ತೊಳೆಯುವದಕ್ಕಾಗಿ’ ಗಂಗಾ ನದಿಯಲ್ಲಿ ಸ್ನಾನ ಮಾಡುವರು. ಈ ಭಕ್ತಾಧಿಗಳು ಏನು ಮಾಡುತ್ತಿದ್ದಾರೆಂದು ನೋಡುವದಕ್ಕೆ ಮೊದಲು, ತಮ್ಮ ಸ್ವಂತ ಜೀವಿತಗಳಲ್ಲಿ ಗುರುತಿಸಿರುವ ಪಾಪದ ಸಮಸ್ಯೆಯನ್ನು ಪರಿಗಣಿಸೋಣ.
ಶ್ರೀ ಸತ್ಯ ಸಾಯಿ ಬಾಬಾ ಮತ್ತು ‘ಸರಿ’ ಮತ್ತು ‘ತಪ್ಪು’
ಹಿಂದು ಬೋಧಕನಾದ ಶ್ರೀ ಸಾಯಿ ಸತ್ಯ ಬಾಬಾ ರವರ ಬರಹಗಳನ್ನು ನಾನು ಓದಿದ್ದೇನೆ. ಅವರ ನೈತಿಕ ಬೋಧನೆಗಳು ಆಶ್ಚರ್ಯವನ್ನುಂಟುಮಾಡುವದನ್ನು ನಾನು ನೋಡಿದ್ದೇನೆ. ಅವರ ಬೋಧನೆಗಳನ್ನು ಈ ಕೆಳಗೆ ಸಾರಾಂಶ ಮಾಡಿದ್ದೇನೆ. ನೀವು ಅವುಗಳನ್ನು ಓದುವಾಗ ನಿಮ್ಮಷ್ಟಕ್ಕೆ ನೀವು ಹೀಗೆ ಕೇಳಿಕೊಳ್ಳಿರಿ, “ಇವು ಜೀವನವನ್ನು ನಡೆಸಲು ಒಳ್ಳೆಯ ನೈತಿಕ ನಿಯಮಗಳಾಗಿವೆಯೋ? ನಾನು ಅವುಗಳಂತೆ ನಡೆಯಬೇಕೋ?
“ಮತ್ತು ಧರ್ಮ ( ನಮ್ಮ ನೈತಿಕ ಕರ್ತವ್ಯ ) ಎಂದರೇನು? ನೀವು ಬೋಧಿಸುವದನ್ನು ಅಭ್ಯಾಸ ಮಾಡುವದು, ನೀವು ಹೀಗೆ ಮಾಡಬೇಕೆಂದು ಹೇಳಿದಂತೆಯೇ ಅದನ್ನು ಮಾಡುವದು, ತತ್ವಗಳನ್ನು ಕಾಪಾಡಿಕೊಳ್ಳುವದು ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುವದು. ಸದ್ಗುಣವನ್ನು ಸಂಪಾದಿಸಿಕೊಳ್ಳಿ, ಧರ್ಮನಿಷ್ಠೆಯನ್ನು ಹಂಬಲಿಸಿ; ದೇವರ ಭಯದಲ್ಲಿ ನಡೆದುಕೊಳ್ಳಿರಿ, ದೇವರನ್ನು ತಲುಪಲು ಬದುಕಿರಿ: ಇದೇ ಧರ್ಮ” ಸತ್ಯ ಸಾಯಿ ಸ್ಪೀಕ್ಸ್ 4, ಪು, 339
“ನಿಮ್ಮ ಕರ್ತವ್ಯವು ನಿಜವಾಗಿ ಏನಾಗಿದೆ? … .
- ಮೊದಲನೆಯದು, ಪ್ರೀತಿ, ಗೌರವ ಮತ್ತು ಕೃತಜ್ಞತೆಯಿಂದ ನಿಮ್ಮ ತಂದೆತಾಯಿಗಳನ್ನು ಸಲಹಿರಿ.
- ಎರಡನೆಯದು, ಸತ್ಯವನ್ನೇ ಆಡಿರಿ ಮತ್ತು ಸದ್ಗುಣವುಳ್ಳವರಾಗಿ ನಡೆದುಕೊಳ್ಳಿರಿ.
- ಮೂರನೆಯದು, ನಿಮಗೆ ಕಳೆಯಲು ಸ್ವಲ್ಪ ಸಮಯವಿರುವಾಗೆಲ್ಲಾ, ನಿಮ್ಮ ಮನಸ್ಸಿಲ್ಲಿರುವ ರೂಪದಿಂದ ದೇವರ ಹೆಸರನ್ನು ಉಚ್ಚರಿಸಿ.
- ನಾಲ್ಕನೆಯದು, ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವದರಲ್ಲಿ ಅಥವಾ ಇತರರಲ್ಲಿ ತಪ್ಪುಗಳನ್ನು ಹುಡುಕುವ ಪ್ರಯತ್ನದಲ್ಲಿ ಎಂದಿಗೂ ತೊಡಗಿಸಿಕೊಳ್ಳಬೇಡಿರಿ.
- ಅಂತಿಮವಾಗಿ, ಯಾವುದೇ ರೀತಿಯಲ್ಲಿ ಇತರರಿಗೆ ನೋವನ್ನುಂಟು ಮಾಡಬೇಡಿರಿ.”
ಸತ್ಯ ಸಾಯಿ ಸ್ಪೀಕ್ಸ್ 4, ಪುಟ 348 – 349
“ಯಾವನಾದರೂ ಅಹಂಕಾರವನ್ನು ನಿಗ್ರಹಿಸಿದರೆ, ತನ್ನ ಸ್ವಾರ್ಥದ ಆಸೆಗಳನ್ನು ಜಯಿಸಿ, ತನ್ನ ಮೃಗದ ಭಾವನೆಗಳನ್ನು ಮತ್ತು ಪ್ರಚೋಧನೆಗಳನ್ನು ನಾಶಮಾಡುವವನು ಮತ್ತು ದೇಹವನ್ನು ಸ್ವಾರ್ಥವೆಂದು ಪರಿಗಣಿಸಿ ಸ್ವಾಭಾವಿಕ ಪ್ರವೃತ್ತಿಯನ್ನು ಬಿಟ್ಟುಬಿಡುವವನು, ಖಂಡಿತವಾಗಿ ಧರ್ಮದ ಹಾದಿಯಲ್ಲಿದ್ದಾನೆ.” ಧರ್ಮ ವಾಹಿನಿ, ಪು.4
ನಾನು ಇವುಗಳನ್ನು ಓದಿದಾಗ, ಸರಳ ನೈತಿಕ ಕರ್ತವ್ಯದಂತೆ ಈ ನಿಯಮಗಳನ್ನು ನಾನು ಅನುಸರಿಸಬೇಕೆಂದು ತಿಳಿದುಕೊಂಡೆನು. ನೀವು ಇದಕ್ಕೆ ಒಪ್ಪಿಕೊಳ್ಳುವದಿಲ್ಲವೋ? ಆದರೆ ನೀವು ಇವುಗಳಂತೆ ನಿಜವಾಗಿ ನಡೆದುಕೊಳ್ಳುತ್ತಿದ್ದೀರೋ? ನೀವು (ಮತ್ತು ನಾನು) ಪರೀಕ್ಷಿಸಿಕೊಂಡಿದ್ದೇವೋ? ಮತ್ತು ಇಂಥ ಒಳ್ಳೆಯ ಬೋಧನೆಗಳಿಗೆ ತಪ್ಪಿದರೆ ಅಥವಾ ನಡೆದುಕೊಳ್ಳದೆ ಇದ್ದರೆ ಏನಾಗುತ್ತದೆ? ಶ್ರೀ ಸತ್ಯ ಸಾಯಿ ಬಾಬಾ ಈ ರೀತಿಯಲ್ಲಿ ಈ ಪ್ರಶ್ನೆಗೆ ಉತ್ತರ ಕೊಡುವದರ ಮೂಲಕ ಮುಂದುವರೆಸುತ್ತಾರೆ.
“ಸಾಮಾನ್ಯವಾಗಿ, ನಾನು ವಿನಯವಾಗಿ ಮಾತನಾಡುತ್ತೇನೆ, ಆದರೆ ಶಿಸ್ತಿನ ಈ ವಿಷಯದಲ್ಲಿ, ನಾನು ಯಾವುದೇ ರಿಯಾಯಿತಿಗಳನ್ನು ಕೊಡುವದಿಲ್ಲ… ನಾನು ಕಟ್ಟುನಿಟ್ಟಿನ ವಿಧೇಯತೆಗೆ ಒತ್ತಾಯಪಡಿಸುತ್ತೇನೆ. ನಿಮ್ಮ ಮಟ್ಟವನ್ನು ಸರಿ ಹೊಂದಿಸಲು ಕಠಿಣತೆಯನ್ನು ಕಡಿಮೆ ಮಾಡುವದಿಲ್ಲ.” ಸತ್ಯ ಸಾಯಿ ಸ್ಪೀಕ್ಸ್ 2, ಪುಟ 186
ಒಂದುವೇಳೆ ನೀವು ಈ ಬೇಡಿಕೆಗಳನ್ನು ಪೂರೈಸಿದರೆ ಇಂಥ ಮಟ್ಟದ ಕಠಿಣತೆಯು ಒಳ್ಳೆಯದು. ಆದರೆ ಒಂದುವೇಳೆ ನೀವು ಈ ಬೇಡಿಕೆಗಳನ್ನು ಪೂರೈಸದೆ ಇದ್ದರೆ ಏನಾಗುತ್ತದೆ? ಇಲ್ಲೇ ‘ಪಾಪದ’ ಪರಿಕಲ್ಪನೆಯು ಬರುತ್ತದೆ. ನಾನು ನೈತಿಕ ಗುರಿಯನ್ನು ತಪ್ಪಿದರೆ ಅಥವಾ ನಾನು ಮಾಡಬೇಕಾದದ್ದನ್ನು ತಿಳಿದು ಮಾಡದೆ ಇದ್ದರೆ, ಆಗ ನಾನು ‘ಪಾಪ’ ಮಾಡುತ್ತೇನೆ ಮತ್ತು ನಾನು ಪಾಪಿಯಾಗಿದ್ದೇನೆ. ತಮಗೆ ‘ಪಾಪಿಗಳೆಂದು’ ಇತರರು ಹೇಳುವದನ್ನು ಒಬ್ಬರಾದರೂ ಇಷ್ಟಪಡುವದಿಲ್ಲ – ಇದು ನಮ್ಮನ್ನು ತೊಂದರೆ ಮತ್ತು ತಪ್ಪಿತಸ್ಥರನ್ನಾಗಿ ಮಾಡುತ್ತದೆ ಮತ್ತು ಈ ಎಲ್ಲಾ ಆಲೋಚನೆಗಳಿಗೆ ನೆಪಕೊಡಲು ಪ್ರಯತ್ನಿಸುವಲ್ಲಿ ಹೆಚ್ಚಿನ ಮಾನಸಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ವ್ಯಯಮಾಡುತ್ತೇವೆ. ಬಹುಶಃ ನಾವು ಸತ್ಯ ಸಾಯಿ ಬಾಬಾರನ್ನು ಹೊರತು ಪಡಿಸಿ ಬೇರೊಬ್ಬ ಬೋಧಕರನ್ನು ಹುಡುಕುತ್ತೇವೆ, ಆದರೆ ಅವರು ‘ಒಳ್ಳೆಯ’ ಬೋಧಕರಾಗಿದ್ದರೆ, ಅವರ ನೈತಿಕ ನಿಯಮಗಳು ಹೆಚ್ಚಿನಾಂಶ ಇದೇ ರೀತಿ ಇರುತ್ತವೆ ಮತ್ತು ಅಭ್ಯಾಸಕ್ಕೆ ಹಾಕಲು ಅಷ್ಟೇ ಸಮನಾಗಿ ಕಷ್ಟಕರವಾಗಿರುತ್ತವೆ.
ಸತ್ಯವೇದ (ವೇದ ಪುಸ್ತಕ) ಹೇಳುವದೇನೆಂದರೆ ಧರ್ಮ ಅಥವಾ ವಿಧ್ಯೆಯ ಮಟ್ಟವು ಏನೇ ಆಗಿದ್ದರೂ, ನಮ್ಮೆಲ್ಲರಿಗೂ ಪಾಪದ ಗ್ರಹಿಕೆಯ ಅನುಭವವಾಗುತ್ತದೆ, ಯಾಕೆಂದರೆ ಪಾಪದ ಈ ಗ್ರಹಿಕೆಯು ನಮ್ಮ ಮನಸ್ಸಾಕ್ಷಿಯಿಂದ ಬರುತ್ತದೆ. ವೇದ ಪುಸ್ತಕವು ಇದನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತದೆ.
ಧರ್ಮಶಾಸ್ತ್ರವಿಲ್ಲದ ಅನ್ಯಜನರು (ಯೆಹೂದ್ಯರಲ್ಲದವರು) ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ (ಸತ್ಯವೇದದಲ್ಲಿರುವ ದಶಾಜ್ಞೆಗಳು) ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ; ಅವರ ಯೋಚನೆಗಳು ವಾದಿಪ್ರತಿವಾದಿಗಳಂತೆ – ಇದು ತಪ್ಪೆಂದು ತಪ್ಪಲ್ಲವೆಂದು ಸೂಚಿಸುತ್ತವೆ. (ರೋಮಾ 2:14-15)
ಆದುದರಿಂದಲೇ ಲಕ್ಷಾಂತರ ಯಾತ್ರಿಕರು ತಮ್ಮ ಪಾಪದ ಭಾವನೆಯನ್ನು ಹೊಂದಿರುತ್ತಾರೆ. ಇದು ಕೇವಲ ವೇದ ಪುಸ್ತಕವು (ಸತ್ಯವೇದ) ಹೇಳುವಂತೆಯೇ ಆಗಿದೆ,
ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ ( ರೋಮಾ 3:23 )
ಪ್ರಥಾಸನ ಮಂತ್ರದಲ್ಲಿ ವ್ಯಕ್ತಪಡಿಸಿರುವ ಪಾಪ
ಈ ಕಲ್ಪನೆಯನ್ನು ಪ್ರಸಿದ್ಧವಾದ ಪ್ರಾರ್ಥಸ್ನಾನ ( ಅಥವಾ ಪ್ರಥಾಸನ ) ಮಂತ್ರದಲ್ಲಿ ವ್ಯಕ್ತಪಡಿಸಲಾಗಿದೆ, ಅದನ್ನು ನಾನು ಈ ಕೆಳಗೆ ನಕಲು ಮಾಡಿದ್ದೇನೆ,
ನಾನು ಪಾಪಿಯಾಗಿದ್ದೇನೆ. ನಾನು ಪಾಪದ ಪರಿಣಾಮವಾಗಿದ್ದೇನೆ. ನಾನು ಪಾಪದಲ್ಲಿ ಹುಟ್ಟಿದ್ದೇನೆ. ನನ್ನ ಆತ್ಮವು ಪಾಪದ ಅಧೀನದಲ್ಲಿದೆ. ನಾನು ಪಾಪಿಗಳಲ್ಲೇ ಬಹಳ ಹೀನನು. ಓ ಕರ್ತನೇ ಸುಂದರವಾದ ಕಣ್ಣುಳ್ಳವನೇ, ಬಲಿದಾನ ಮಾಡುವ ಓ ಕರ್ತನೇ, ನನ್ನನ್ನು ರಕ್ಷಿಸು.
ನೀವು ಈ ಹೇಳಿಕೆ ಮತ್ತು ಪ್ರಾರ್ಥನೆಯ ವಿಜ್ಞಾಪನೆಯೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳುವದಿಲ್ಲವೋ?
ಸುವಾರ್ತೆಯು ‘ನಮ್ಮ ಪಾಪಗಳನ್ನು ತೊಳೆಯುತ್ತದೆ’
ಕುಂಭ ಮೇಳೆ ಯಾತ್ರಿಗಳು ಮತ್ತು ಪ್ರಥಾಸನ ಭಕ್ತಾಧಿಗಳು ತಮ್ಮ ‘ಪಾಪಗಳನ್ನು ತೊಳೆದುಕೊಳ್ಳಲು” ಹುಡುಕುತ್ತಿರುವ ಅದೇ ಸಮಸ್ಯೆಯನ್ನು ಸುವಾರ್ತೆಯು ತಿಳಿಸುತ್ತದೆ. ತಮ್ಮ ‘ನಿಲುವಂಗಿಗಳನ್ನು’ ( ಅಂದರೆ ತಮ್ಮ ನೈತಿಕ ಕ್ರಿಯೆಗಳು ) ತೊಳೆದುಕೊಳ್ಳುವವರಿಗೆ ಇದು ಆಶೀರ್ವಾದಗಳನ್ನು ವಾಗ್ದಾನ ಮಾಡಿದೆ. ಆ ಆಶೀರ್ವಾದವು ಪರಲೋಕದಲ್ಲಿರುವ (‘ಆ ಪಟ್ಟಣ’) ಅಮರತ್ವವೇ ( ಜೀವವೃಕ್ಷ ) ಆಗಿದೆ.
“ತಮ್ಮ ನಿಲುವಂಗಿಗಳನ್ನು ತೊಳಕೊಂಡವರು ಧನ್ಯರು; ಅವರಿಗೆ ಜೀವವೃಕ್ಷದ ಹಕ್ಕು ಇರುವದು; ಅವರು ಬಾಗಿಲುಗಳಿಂದ ಆ ಪಟ್ಟಣದೊಳಕ್ಕೆ ಸೇರುವರು.” ( ಪ್ರಕಟನೆ 22:14 )
ಕುಂಭ ಮೇಳ ಹಬ್ಬವು ನಮ್ಮ ಪಾಪದ ನಿಜಸ್ಥಿತಿಯ ‘ಕೆಟ್ಟ ಸುದ್ಧಿ’ ಯನ್ನು ನಮಗೆ ತೋರಿಸುತ್ತದೆ, ಮತ್ತು ಇದು ಶುದ್ಧೀಕರಣಕ್ಕಾಗಿ ನಮ್ಮನ್ನು ಎಚ್ಚರಗೊಳಿಸುತ್ತದೆ. ಸುವಾರ್ತೆಯಿಂದ ಉಂಟಾಗುವ ಈ ವಾಗ್ದಾನವು ಅಸ್ತಿತ್ವದಲ್ಲಿದ್ದರೆ ಅದು ಬಹಳ ಪ್ರಾಮುಖ್ಯುವಾಗಿದೆ, ಖಂಡಿತವಾಗಿ ಇದನ್ನು ಬಹಳ ಸ್ಪಷ್ಟವಾದ ರೀತಿಯಲ್ಲಿ ಪರಿಶೋಧಿಸುವದು ಯೋಗ್ಯವಾಗಿದೆ. ಈ ವೆಬ್ ಸೈಟ್ ನ ಉದ್ಧೇಶವು ಇದೇ ಆಗಿದೆ.
ನೀವು ನಿತ್ಯಜೀವದಲ್ಲಿ ಆಸಕ್ತಿ ಹೊಂದಿದ್ದರೆ, ನೀವು ಪಾಪದಿಂದ ಬಿಡುಗಡೆಯಾಗಲು ಆಶಿಸಿದರೆ, ಪ್ರಜಾಪತಿ – ಅಂದರೆ ಜಗತ್ತನ್ನು ಮತ್ತು ನಮ್ಮನ್ನು ಉಂಟುಮಾಡಿದ ದೇವರು – ನಾವು ಪರಲೋಕವನ್ನು ಪಡೆದುಕೊಳ್ಳುವಂತೆ ನಮಗಾಗಿ ಹೇಗೆ ಮತ್ತು ಯಾಕೆ ಒದಗಿಸಿದ್ದಾನೆಂದು ಎಂದು ನೋಡಲು ಇದರ ಜೊತೆಗೆ ಪ್ರಯಾಣ ಮಾಡುವದು ಜ್ಞಾನವಂತಿಕೆಯಾಗಿದೆ. ಮತ್ತು ವೇದಗಳು ಸಹ ನಮಗೆ ಇದನ್ನು ಬೋಧಿಸುತ್ತವೆ. ಋಗ್ವೇದದಲ್ಲಿ ಪುರುಷಾಸುಕ್ತ, ಇದು ಪ್ರಜಾಪತಿಯ ನರಾವತಾರ ಮತ್ತು ಆತನು ನಮಗಾಗಿ ಮಾಡಿದ ಬಲಿದಾನವನ್ನು ವಿವರಿಸುತ್ತದೆ. ಈ ಯೋಜನೆಯು ಮಾನವ ಚರಿತ್ರೆಯಲ್ಲಿ ನರಾವತಾರದ, ಯೇಸು ಸತ್ ಸ್ಯಾಂಗ್ ನ ( ಯೇಸು ಕ್ರಿಸ್ತನ ) ಜೀವ ಮತ್ತು ಮರಣದ ಮೂಲಕ ಹೇಗೆ ತರಲಾಯಿತೆಂದು ಹೆಚ್ಚು ವಿವರವಾಗಿ ಸತ್ಯವೇದವು ( ವೇದ ಪುಸ್ತಕ ) ವಿವರಿಸುತ್ತದೆ. ನೀವು ಸಹ ನಿಮ್ಮ ‘ಪಾಪಗಳನ್ನು ತೊಳೆದುಕೊಳ್ಳಬಹುದು’ ಎಂದು ನೋಡುವದಕ್ಕಾಗಿ ಈ ಯೋಜನೆಯನ್ನು ಪರಿಶೋಧಿಸಲು ಮತ್ತು ಅರ್ಥಮಾಡಿಕೊಳ್ಳಲು ನೀವು ಯಾಕೆ ಸಮಯ ತೆಗೆದುಕೊಳ್ಳಬಾರದು.